Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011.

Banner for Manual Scavengers

ಶಿಗ್ಗಾಂವ ಪುರಸಭೆ ಬಗ್ಗೆ ಸಂಕ್ಷಿಪ್ತ ಪರಿಚಯ 

 ಶಿಗ್ಗಾಂವ ಪುರಸಭೆಯು 1975 ರಲ್ಲಿ ಸ್ಥಾಪನೆಯಾಯಿತು.  ಶಿಗ್ಗಾಂವ ಪುರಸಭೆಯು ಬೆಂಗಳೂರಿನಿಂದ ಪುಣೆ ಗೆ ಹೋಗುವ ಎನ್ಎಚ್-4 ರಸ್ತೆಯಲ್ಲಿದ್ದು ಶಿಗ್ಗಾಂವ ಸುಮಾರು 450 ಕೀಲೋಮೀಟರ್ ದೂರದಲ್ಲಿರುತ್ತದೆ. 2011 ಜನಗಣತಿಯ ಪ್ರಕಾರ ಶಿಗ್ಗಾಂವ ಪುರಸಭೆ ವ್ಯಾಪ್ತಿಯಲ್ಲಿ 28,216 ಜನಸಂಖ್ಯೆಯನ್ನು ಹೊಂದಿರುತ್ತದೆ.   ಶಿಗ್ಗಾಂವ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು  23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ ಶಿಗ್ಗಾಂವ ಪುರಸಭೆಯ ವ್ಯಾಪ್ತಿಯು ಒಟ್ಟು 2.04 ಚದುರ ಕೀಲೋಮೀಟರ್ ಗಳಿರುತ್ತದೆ.  ಪ್ರವಾಸ ತಾಣವೆಂದೆ ಪ್ರಸಿದ್ದಿ ಪಡೆದ ಗೋಟಗೊಡೆ ಪಾರ್ಕ್ ಸುಮಾರು 8 ಕೀಲೋಮೀಟರ್ ದೂರದಲ್ಲಿರುತ್ತದೆ. ಹುಬ್ಬಳ್ಳಿ ಅಂತರ್ ರಾಷ್ಷೀಯ ವಿಮಾನ ನಿಲ್ದಾಣವು ಶಿಗ್ಗಾಂವಯಿಂದ 42 ಕೀಲೋಮೀಟರ್  ದೂರದಲ್ಲಿರುತ್ತದೆ. ಶಿಗ್ಗಾಂವಯಲ್ಲಿ ಪ್ರಸಿದ್ದವಾದ ಪುರಾತನ ಕಾಲದ ಶಿಶುವಿನಹಾಳ ಶರೀಪರ ಮತ್ತು ಭಕ್ತ ಕನಕದಾಸರ ದೇವಸ್ಥನವಿದ್ದು ದೇವಲಯದ ಒಡವೆಗಳು ಕೋಟ್ಯಾಂತರ ಬೆಲೆ ಬಾಳುವಂತಹದಾಗಿರುತ್ತದೆ. ಹಾಗೂ ಗಂಗೆಭಾವಿ ಕ್ಷೆತ್ರ ದಲ್ಲಿ ವರ್ಷಕೊಮ್ಮೆ ನೆಡೆಯುವ ಜಾತ್ರೆ ಸಮಯದಲ್ಲಿ ದೇವರನ್ನು ನೋಡಲು ಜನಸಾಗರವೇ ಹರಿದು ಬರುತ್ತದೆ.

Brief  Introduction of   Shiggaon TMC:-

 The Town Municipal Council (TMC) Shiggaon was constituted in 1975.  It is situated along  Pune- Bangalore National Highway No.4 at a distance of 450 Kms from Bangalore.  The Shiggaon fort  now comes under the archeological department. The Town has the famous Shree Kanakadasaru, Shishuvinahal Sharifaru and shree Gangebhavi  temple having jewellary which is said to be worth in crores.The Gotagodi Parks stands at just 8 Kms North-West of the Town. The new international airport is just 42 kms from the Town. It has a population of 28,216 as per census 2011. The TMC has 23 wards and equal number of councilors and 5 Numbers of Nominee Councilors.  Shiggaon  TMC stretches to an area of 2.04 Sq Kms. 

ಘನತ್ಯಾಜ್ಯ ವಸ್ತು ನಿರ್ವಹಣೆ:   ಪುರಸಭೆಯ 23-ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನುಹೊರ ಗುತ್ತಿಗೆ ನೀಡಲಾಗಿದೆ.  ಇದರಲ್ಲಿ ಬೀದಿಗುಡಿಸುವುದು ಮತ್ತು ಕಸ ಸಾಗಾಣಿಕೆ ಸೇರಿಕೊಂಡಿರುತ್ತದೆ.  ಸಾರ್ವಜನಿಕರು ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು ಪ್ರೋತ್ಸಾಹಿಸಿ ನಗರ ನ್ಯೆರ್ಮಲ್ಯವನ್ನು ಕಾಪಾಡಲು ಸಹಕರಿಸುವುದು.ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 08378-255250/255703    –ಮುಖ್ಯಾಧಿಕಾರಿ, ಪುರಸಭೆ ಶಿಗ್ಗಾಂವ.

Solid Waste Management:

         Solid Waste Management in 23 wards has been outsourced. It includes  street sweeping and waste transportation. Citizens has to encourage the Door to Door collection activities in the wards and  pay the  service charges as per the MSW-rules for door-to-door collections. If you have any complaints regarding  solid waste management please call our helpline No-.08378-255250/255703   Help us to keep your city clean and hygienic. -BY Chief Officer., TMC Shiggaon.

ಬೀದಿ ದೀಪಗಳ ನಿರ್ವಹಣೆ:   ಪುರಸಭೆಯ ಬೀದಿ ದೀಪಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 08378-255250/255703   –ಮುಖ್ಯಾಧಿಕಾರಿ, ಪುರಸಭೆ ಶಿಗ್ಗಾಂವ.

Street Light Management:

         Street light Management has been outsourced. It includes  new street connection and repair. If you have any complaints regarding  solid waste management please call our helpline No-08378-255250/255703  -BY Chief Officer., TMC Shiggaon.

  • How to Reach
  • BY AIR- The nearest international airport from Shiggaon  is 356 km away in Bangalore, from where one can take flights for most of the important cities in India.
  • BY RAIL- Shiggaon nearest Haveri railway station is connected with most of the metros like Mumbai, Bangalore and Chennai through regular trains.
  • BY ROAD- There is a good network of roads that connects Shiggaon to other important cities of the region.


 ಕೆ.ಎಂ.ಆರ್.ಪಿ ಗಣಕೀಕರಣ ಯೋಜನೆಯ ಕಿರಿ ಪರಿಚಯ

ಪೌರಸುಧಾರಣಾ ಕೋಶದ ಮೇಲುಸ್ತುವಾರಿಯಲ್ಲಿ  ಶಿಗ್ಗಾಂವ ಪುರಸಭೆಯಲ್ಲಿ ಹಲವಾರು ಗಣಕೀಕರಣ ಯೋಜನೆಗಳು ಪೂರ್ಣಗೊಂಡಿರುತ್ತವೆ ಹಾಗೂ ಇನ್ನು ಕೆಲ ಗಣಕೀಕರಣ ಯೋಜನೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಮುಕ್ತಾಯಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಲಭ್ಯವಾಗಲಿವೆ.ಈಗಾಗಲೇ ಬಹುತೇಕ ಮಾಹಿತಿಯನ್ನು ಕಛೇರಿ ವೆಬ್‌ ಸೈಟ್‌ನಲ್ಲಿ ಅಳವಡಿಸಲಾಗಿರುತ್ತದೆ.

  • ಕಛೇರಿ ವೆಬ್‌ಸೈಟ್: ಶಿಗ್ಗಾಂವ ಪುರಸಭೆಯು ತನ್ನದೇ ಆದ ವೆಬ್‌ಸೈಟ್ ಹೊಂದಿದ್ದು ಪಟ್ಟಣದ ಸಮಗ್ರ ಮಾಹಿತಿ ಇದರಲ್ಲಿ ಲಭ್ಯವಿರುತ್ತದೆ. ಕಛೇರಿಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಪೌರಸುಧಾರಣಾ ಕೋಶ ಈ ವೆಬ್ ಸೈಟ್ ಅಭಿವೃದ್ಧಿ ಪಡಿಸಿದ್ದು  ಶಿಗ್ಗಾಂವ ಪುರಸಭೆಯಿಂದ ಈ ವೆಬ್ ಸೈಟ್ ನಿರ್ವಹಣೆ ಮಾಡಲಾಗುತ್ತಿದೆ. ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಹತ್ತು ಹಲವು ಉಪಯುಕ್ತ ಮಾಹಿತಿ ಈ ವೆಬ್ ತಾಣದಲ್ಲಿ ಲಭ್ಯವಿರುತ್ತದೆ. ಪೌರ ಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿ ನಿರ್ವಹಿಸಲಾಗುತ್ತಿರುವ ಎಲ್ಲಾ ಆನ್‌ಲೈನ್ ಅಪ್ಲಿಕೇಷನ್‌ಗಳು ಈ ವೆಬ್ ತಾಣದಲ್ಲಿ ದೊರೆಯುವಂತಿದ್ದು ಪಟ್ಟಣದ ನಾಗರೀಕರು ಈ ತಾಣಕ್ಕೆ ಬೇಟಿ ನೀಡಿ ಅವಶ್ಯ ಮಾಹಿತಿ ಪಡೆಯಬಹುದಾಗಿರುತ್ತದೆ.
  • ಜನನ-ಮರಣ ದಾಖಲೆಗಳ ಆನ್ ಲೈನ್ ಅಪ್ಲಿಕೇಷನ್:1990ರಿಂದ ಇಲ್ಲಿಯವರೆಗಿನ ಪಟ್ಟಣದ ಎಲ್ಲಾ ಜನನ-ಮರಣ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದ್ದು ಸಾರ್ವಜನಿಕರಿಗೆ ಗಣಕೀಕೃತ ಜನನ-ಮರಣ ದಾಖಲಾತಿಗಳನ್ನು ವಿತರಿಸಲಾಗುತ್ತಿದೆ. ಹಳೆಯ ಜನನ-ಮರಣ ದಾಖಲಾತಿಗಳ ಡಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ದಾಖಲಾತಿಗಳ ಗಣಕೀಕರಣ ಕಾರ್ಯ ಪೂರ್ಣಗೊಳ್ಳಲಿದೆ. ಇದರಿಂದ ಸಾರ್ವಜನಿಕರು ತ್ವರಿತವಾಗಿ ಜನನ-ಮರಣ ದಾಖಲಾತಿಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದೆ.
  • ಪಿ.ಜಿ.ಆರ್. ಆನ್ ಲೈನ್ ಅಪ್ಲಿಕೇಷನ್: ಪಟ್ಟಣದ ನಾಗರೀಕರ ದೈನಂದಿನ ಅವಶ್ಯಕತೆಗಳಾದ ಬೀದಿ ದೀಪ, ಕುಡಿಯುವ ನೀರು, ಸ್ವಚ್ಚತೆ ಇತ್ಯಾದಿ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಈ ಕುಂದುಕೊರತೆ ಪರಿಹಾರ ಕೇಂದ್ರವು ಪ್ರತಿ ದಿನ ಮುಂಜಾನೆ 8.00 ರಿಂದ ಸಂಜೆ 8.00ರ ವರಗೆ ಕಾರ್ಯ ನಿರ್ವಹಿಸುತ್ತದೆ.ಸಾರ್ವಜನಿಕರು ಕುಂದುಕೊರತೆ ಪರಿಹಾರ ಕೇಂದ್ರದ ಸಹಾಯವಾಣಿ : 08378-255703 ಕ್ಕೆ ಕರೆ ಮಾಡಿ ದೂರು ನೊಂದಾಯಿಸಿಕೊಳ್ಳಬಹುದಾಗಿದೆ ಅಲ್ಲದೆ ತಮ್ಮ ದೂರಿನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿ ಈ ಕಛೇರಿ ವೆಬ್ ತಾಣಕ್ಕೆ ಬೇಟಿ ನೀಡಿ ಪಿ.ಜಿ.ಆರ್. ಆನ್‌ಲೈನ್ ಅಪ್ಲಿಕೇಷನ್ ಮುಖಾಂತರವೂ ದೂರು ನೊಂದಾಯಿಸಬಹುದಾಗಿರುತ್ತದೆ (ಆನ್‌ಲೈನ್ ಮುಖಾಂತರ ದೂರು ನೊಂದಾಯಿಸುವ ವಿಧಾನ) ಅಥವಾ ನೇರವಾಗಿ ಕುಂದು ಕೊರತೆ ಪರಿಹಾರ ಕೇಂದ್ರಕ್ಕೆ ಬೇಟಿ ನೀಡಿ ದೂರು ನೊಂದಾಯಿಸಬಹುದಾಗಿರುತ್ತದೆ. ದೂರು ಸ್ವೀಕರಿಸಿದ ನಂತರ ಕುಂದು ಕೊರತೆ ಪರಿಹಾರ ಕೇಂದ್ರದ ನಿರ್ವಾಹಕರು ಒಂದು " Unique Complaint Tracking Number " ನೀಡುವರು. ಇದರ ಸಹಾಯದಿಂದ ನಾಗರೀಕರು ತಮ್ಮ ದೂರಿನ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ದೂರು ಪರಿಹಾರ ಕಾರ್ಯದ ಪ್ರತಿ ಹಂತದ ಸ್ಥಿತಿಯನ್ನು ಇ-ಮೇಲ್ ಮೂಲಕ ಸಹ ಇ-ಮೇಲ್ ವಿಳಾಸ ನೊಂದಾಯಿಸಿ  ಪಡೆಯಬಹುದಾಗಿರುತ್ತದೆ.
  • ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಕಾರ್ಯ:ಪೌರ ಸುಧಾರಣಾ ಯೋಜನೆಯಡಿ  ಶಿಗ್ಗಾಂವ ಪುರಸಭೆಲ್ಲಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಟ್ಟಣದ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದುಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ತೆರಿಗೆ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಶಿಗ್ಗಾಂವ ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
  • ನಿಧಿ ಆಧಾರಿತ ದ್ವಿ-ನಮೂದು ಸಂಚಯನ ಲೆಕ್ಕ ಪದ್ಧತಿ:  ಶಿಗ್ಗಾಂವ ಪುರಸಭೆ ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು  ಈ ಆನ್‌ಲೈನ್ ಅಪ್ಲಿಕೇಷನ್‌ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಕ್ಕಿಗರು ದಿನಂಪ್ರತಿ ಅಪ್‌ಡೇಟ್‌ ಮಾಡುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌ಸೈಟ್ ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
  • ತರೆ ಆನ್‌ಲೈನ್ ಅಪ್ಲಿಕೇಷನ್‌ಗಳು:  ಸಿ.ಎಂ.ಎಸ್.ಎಂ.ಟಿ.ಡಿ.ಪಿ, ಆಶಾಕಿರಣ ಮಾಹಿತಿ, ಎಸ್.ಜೆ.ಎಸ್.ಆರ್.ವೈ, ಎಸ್.ಎಲ್.ಬಿ, ನಮ್ಮ ಮನೆ ಇತ್ಯಾದಿ ಪ್ರಮುಖ ಆನ್ ಲೈನ್ ಅಪ್ಲಿಕೇಷನ್ ಗಳನ್ನು ಪೌರಸುಧಾರಣಾ ಕೋಶದ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಕಛೇರಿಯ ಸುಲಭ ನಿರ್ವಹಣೆಗೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಈ ಆನ್‌ಲೈನ್ ಅಪ್ಲಿಕೇಷನ್‌ಗಳ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

 

| This page is maintained by : Chief Office  TMC Shiggaon |
|Last Updated : 17/05/2013



 

 

 

 

 

No. Of Visitors :
Last Updated   : 20/05/2013  Release History
Release 2.0.0, Powered By Karnataka Municipal Data Society & maintained by Shiggaon TMC
This website can best viewed with the resolution 1024 * 768 using Internet Explorer 7.0 or above.
Valid CSS!